ಭಾರತೀಯ ಪಾಕಪದ್ಧತಿಯಲ್ಲಿ ಈ ಕಷಾಯವನ್ನು ದಿನನಿತ್ಯದ ಪಾಕವಿಧಾನಗಳಲ್ಲಿ ಸುಲಭವಾಗಿ ಕಾಣಬಹುದು. ಕೆಮ್ಮು ಮತ್ತು ಶೀತಕ್ಕೆ ನೈಸರ್ಗಿಕ ಚಿಕಿತ್ಸೆಗಾಗಿ ಮನೆಯ ಪರಿಹಾರ ಶುಂಠಿ ಕಷಾಯ. ಶುಂಠಿ ಕಷಾಯವು ಕೆಮ್ಮು ಮತ್ತು ಶೀತಕ್ಕೆ ಪರಿಪೂರ್ಣ ಮನೆ ಮದ್ದಾಗಿದೆ, ಇದನ್ನು 1 ವರ್ಷದ ಮತ್ತು ಅದಕ್ಕಿಂತ ಮೇಲ್ಪಟ್ಟ ಪುಟ್ಟ ಮಕ್ಕಳಿಗೆ  ಹಾಗು ದೊಡ್ಡವರಿಗು ನೀಡಬಹುದು. ಇದನ್ನು ಪ್ರಸಿದ್ಧವಾಗಿ ಅಜ್ಜಿಯ ಕಷಾಯ ಎಂದು ಕರೆಯಲಾಗುತ್ತದೆ. ಕೆಮ್ಮು, ಜ್ವರ, ಶೀತ, ರೋಗಗಳಿಂದ ರಕ್ಷಣೆ  ಮತ್ತು ಅನೇಕ ಕಾಯಿಲೆಗಳ ಚಿಕಿತ್ಸೆಗೆ ಅಥವಾ ಮನೆಯಲ್ಲಿ ತಯಾರಿಸಬಹುದಾದ ನೈಸರ್ಗಿಕ ಔಷಧವಾಗಿದೆ.

ದಿನಕ್ಕೆ ಎರಡು ಬಾರಿ ಈ ಕಷಾಯವನ್ನು ಕುಡಿಯುವುದರಿಂದ ತಕ್ಷಣವೇ ಪ್ರಯೋಜನ ಸಿಗುವುದು. ನಮ್ಮ ದೇಹದ ವ್ಯವಸ್ಥೆಯು ಆಂತರಿಕವಾಗಿ ಮತ್ತು ನೈಸರ್ಗಿಕವಾಗಿ ದೇಹವನ್ನು ರಕ್ಷಿಸುವುದು. ನೈಸರ್ಗಿಕವಾಗಿ ವಾಸಿಯಾಗಲು ಮತ್ತು ಉತ್ತಮ ಫಲಿತಾಂಶಗಳಿಗಾಗಿ ಈ ಕಷಾಯವು ತುಂಬಾ ಉಪಾಕಾರಿಯಾಗಿದೆ.

 

ಸಾಮಗ್ರಿಗಳು:

  1. ಶುಂಠಿ – 2 ಚಮಚ (ತುರಿದದ್ದು )
  2. ನೀರು – 1 ಕಪ್
  3. ಜೇನು ತುಪ್ಪ – 1 ಚಮಚ
  4. ನಿಂಬೆ – ರಸ  1/2 ಚಮಚ

ವಿಧಾನ:

  1.  ಪಾತ್ರೆಗೆ ನೀರು, ತುರಿದ ಶುಂಠಿ ಸೇರಿಸಿ.
  2. ನೀರಿನ  ಬಣ್ಣ ಬದಲಾಗುವ ತನಕ ಮಿಶ್ರಣವನ್ನು 5 -10 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ.
  3. ಮಿಶ್ರಣವನ್ನು ಸ್ವಲ್ಪ ಸಮಯದವರೆಗೆ ತಣ್ಣಗಾಗಲು ಬಿಡಬೇಕು ನಂತರ ಶೋಧಿಸಬೇಕು.
  4. ಇದಕ್ಕೆ ನಿಂಬೆ ರಸ ಮತ್ತು ಜೇನು ತುಪ್ಪ ಮಿಶ್ರಣ ಮಾಡಿ ಸ್ವಲ್ಪ ಬಿಸಿ ಇರುವಂತೆಯೇ ಸೇವಿಸಬೇಕು.
  5. ಶುಂಠಿ ಕಷಾಯ ಸಿದ್ಧವಾಗಿದೆ.
Share
Go top
×