ಭಾರತವನ್ನು ಸಾಂಬಾರ ಪದಾರ್ಥಗಳ ತವರು ಎಂದರೆ ಯಾವುದೇ ತಪ್ಪಿಲ್ಲ. ಸಾವಿರಾರು ವರ್ಷಗಳ ಹಿಂದಿನಿಂದಲೂ ನಾವು ಭಾರತೀಯರು ಸಾಂಬಾರ ಪದಾರ್ಥಗಳನ್ನು ಬಳಸುತ್ತಾ ಬಂದಿದ್ದಿವೆ. ಇದರಲ್ಲಿ ಇರುವಂತಹ ಕೆಲವೊಂದು ಔಷಧೀಯ ಗುಣಗಳಿಂದಾಗಿ ಇವುಗಳನ್ನು ಆಯುರ್ವೇದದಲ್ಲೂ ಬಳ ಸಲಾಗುತ್ತಿದೆ.

ನಾವು ಭಾರತೀಯರು ತಮ್ಮ ಹೆಚ್ಚಿನ ಎಲ್ಲಾ ಅಡುಗೆಗಳಲ್ಲಿ ಅರಿಶಿನ ಬಳಸುವರು. ಅರಿಶಿನವನ್ನು ಕೆಲವೊಂದು ಧಾರ್ಮಿಕ ಚಟುವಟಿಕೆಗಳಲ್ಲಿ ಬಳಸುವ ಕಾರಣದಿಂದ ಇದನ್ನು ಪವಿತ್ರವೆಂದು ನಂಬಲಾಗುತ್ತದೆ. ಯಾವುದೇ ರೀತಿಯ ಗಾಯದಿಂದ ಹಿಡಿದು ದೊಡ್ಡ ಮಟ್ಟದ ಕ್ಯಾನ್ಸರ್ ಅನ್ನು ತಡೆಯುವಂತಹ ಶಕ್ತಿ ಅರಿಶಿನಕ್ಕೆ ಇದೆ ಎಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.

ಭಾರತದಲ್ಲಿ ಹೆಚ್ಚಾಗಿ ಅರಿಶಿನವನ್ನು ಅಡುಗೆಯಲ್ಲಿ ಅಥವಾ ಬಿಸಿ ಹಾಲು ಅಥವಾ ಬಿಸಿ ನೀರಿಗೆ ಹಾಕಿ ಕುಡಿಯಲಾಗುತ್ತದೆ. ಆದರೆ ಇಂದಿನ ದಿನಗಳಲ್ಲಿ ಅರಿಶಿನ ಚಹಾವು ವಿಶ್ವದಾದ್ಯಂತ ಜನಪ್ರಿಯತೆ ಪಡೆದುಕೊಂಡಿದೆ. ಅರಶಿನ ಚಹಾದಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಅರಿಶಿನ ಚಹಾ ತಯಾರಿಸುವುದು ಹೇಗೆ ಎಂದು ತಿಳಿಯಿರಿ.

ತಯಾರಿಸುವ ವಿಧಾನ

  • ಒಂದು ಸಣ್ಣ ಪಾತ್ರೆಯಲ್ಲಿ ಎರಡು ಕಪ್ ನೀರು ಬಿಸಿ ಮಾಡಿ.
  • ಒಂದು ಇಂಚಿನಷ್ಟಿರುವ ತುರಿದ ತಾಜಾ ಅರಿಶಿನ/ 1 ಚಮಚ ಅರಶಿನ ನೀರಿಗೆ ಹಾಕಿ.
  • ಪಾತ್ರೆಗೆ ಮುಚ್ಚಳ ಮುಚ್ಚಿ ಮತ್ತು 2-3 ನಿಮಿಷ ಕಾಲ ಇದು ಕುದಿಯಲು ಬಿಡಿ.
  • ಈಗ ಈ ಮಿಶ್ರಣವನ್ನು ಒಂದು ಲೋಟಕ್ಕೆ ಹಾಕಿ.
  • ಒಂದು ಚಮಚ ಜೇನುತುಪ್ಪ ಮತ್ತು ಚಿಟಿಕೆ ಕರಿಮೆಣಸಿನ ಪುಡಿ ಹಾಕಿ ಕಲಸಿ.
  • ಪ್ರತಿನಿತ್ಯ ಉಪಹಾರಕ್ಕೆ ಮೊದಲು ಇದನ್ನು ಸೇವಿಸಿ.
Share
Go top
×