ಸಾವಿರಾರು ವರ್ಷಗಳಿಂದಲೂ ಶುಂಠಿ ನಮ್ಮ ಆಹಾರ ಸಂಸ್ಕೃತಿ ಮತ್ತು ಔಷಧ ಸಂಸ್ಕೃತಿ ಎರಡರಲ್ಲೂ ಮಹತ್ವದ ಸ್ಥಾನ ಗಳಿಸಿಕೊಂಡಿದೆ. ಭಾರತ ಸೇರಿದಂತೆ ಏಷ್ಯಾದ ರಾಷ್ಟ್ರಗಳಲ್ಲಿ ಇದರ ಬಳಕೆ ಹೆಚ್ಚು. ಶೀತವಾಗಲಿ, ಅಜೀರ್ಣವಾಗಲಿ, ತಲೆನೋವಾಗಲಿ ಮನೆಮದ್ದುಗಳ ಪೈಕಿ ತಕ್ಷಣ ನೆನಪಿಗೆ ಬರುವುದು ಶುಂಠಿ. ಶುಂಠಿ ನೀರನ್ನು ಕೊಬ್ಬು ಕರಗಿಸಲೂ ಬಳಸಬಹುದು. ಅರ್ಧಕಪ್ ಶುಂಠಿ ನೀರು ಕುಡಿದರೆ ಸಣ್ಣಪುಟ್ಟ ತೊಂದರೆಗಳೆಲ್ಲಾ ಮಾಯ. ಹೀಗಾಗಿಯೇ ನಮ್ಮ ಹಿತ್ತಲುಗಳಲ್ಲಿ ಶುಂಠಿಗಿಡಕ್ಕೆ ಕಾಯಂ ಸ್ಥಾನ.
ಶುಂಠಿ ನೀರನ್ನು ತಯಾರಿಸುವ ವಿಧಾನ:
ಒಂದು ಪಾತ್ರೆಯಲ್ಲಿ ಸುಮಾರು ಒಂದು ಲೀಟರ್ ನೀರನ್ನು ಹಾಕಿ ಇದರಲ್ಲಿ ಸುಮಾರು ನೂರು ಗ್ರಾಂ ನಷ್ಟು ಶುಂಠಿಯನ್ನು ಸಣ್ಣ ಸಣ್ಣ ಹೋಳುಗಳಾಗಿ ಕತ್ತರಿಸಿ ನೀರಿಗೆ ಹಾಕಿ ನೀರನ್ನು ಕುದಿಯಲು ಬಿಡಿ. ಚೆನ್ನಾಗಿ ಕುದ್ದ ಬಳಿಕ ನೀರಿಗೆ ಸ್ವಲ್ಪ ನಿಂಬೆರಸ ಸೇರಿಸಿ ಕುಡಿಯಿರಿ. ಪ್ರತಿ ದಿನ ಬೆಳಗ್ಗೆ ಎದ್ದೊಡನೆ ಹಾಗೂ ರಾತ್ರಿ ಊಟಕ್ಕೂ ಮುನ್ನ ಶುಂಠಿ ನೀರನ್ನು ಕುಡಿಯುವುದರಿಂದ ಎಷ್ಟೆಲ್ಲ ಪ್ರಯೋಜನಗಳಿವೆ ಗೊತ್ತಾ?
ಶುಂಠಿ ನೀರಿನ ಆರೋಗ್ಯಕರ ಪ್ರಯೋಜನಗಳು:
- ಶುಂಠಿಯ ನೀರು ದೇಹದ ಕೊಲೆಸ್ಟ್ರಾಲ್ ಗಳ ಮಟ್ಟವನ್ನು ನಿಯಂತ್ರಿಸುತ್ತುದೆ.
- ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
- ತೂಕ ಇಳಿಕೆಯಲ್ಲಿ ಸಹಾಯ ಮಾಡುತ್ತದೆ.
- ಶುಂಠಿಯ ನೀರು ಒಂದು ಅತ್ಯುತ್ತಮ ಆಂಟಿ ಆಕ್ಸಿಡೆಂಟ್ ಆಗಿದೆ.
- ಶುಂಠಿಯ ನೀರು ಹಲವಾರು ಕ್ಯಾನ್ಸರ್ ಗಳಿಂದ ರಕ್ಷಿಸುತ್ತದೆ.